ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಎಸ್.ಕೆ.ಕರೀಂಖಾನ್
ಗಾಯನ: ಎಸ್.ಜಾನಕಿ

ಓ ಜನನೀ ಕಲ್ಯಾಣಿ!
ಪತಿಯ ಪರಿಪಾಲಿಸಮ್ಮ ಭವಾನಿ
ನೀನೆ ಗತಿ ದಾಯಿನಿ
ಓ ಜನನೀ ಕಲ್ಯಾಣಿ!

ಮನದಾನಂದ ಮನೋಹರ ಬಾಳು.. 
ವಿಧಿ ತಂದ ವಿಯೋಗದ ಗೋಳು |೨|
ಮತಿಯು ಮರುಳಾಗಿ ಗತಿ ಹೀನಳಾಗಿ
ಬಂದೆ ನೀ ಲಾಲಿಸಮ್ಮ ಶರ್ವಾಣಿ
ಕರುಣಿ ಕಾತ್ಯಾಯಿನಿ
ಓ ಜನನೀ ಕಲ್ಯಾಣಿ!

ಸುಖ ಸಂತೋಷ ವಿನೋದವ ಕಾಣೆ..
ಪತಿಸೇವ ಪರಾಜಿತೆ ನಾನೆ |೨|
ಪತಿಯ ಸುಖಕಾಗಿ ಸವಿಬಾಳಿಗಾಗಿ ಬಲಿಯು ನಾನಾದೆನಮ್ಮ
ನಲಿಯೆ ನಾರಯಣಿ
ಓ ಜನನೀ ಕಲ್ಯಾಣಿ!
ಪತಿಯ ಕಾಪಾಡಮ್ಮ! |೩|

Category: ಕನ್ನಡ ಚಿತ್ರಸಾಹಿತ್ಯ
Category: ಎಸ್.ಕೆ.ಕರೀಂಖಾನ್ ಸಾಹಿತ್ಯ
Category: ಸ್ವರ್ಣ ಗೌರಿ ಚಿತ್ರ